,

ವಿಟ್ಲ ಕಾನತ್ತಡ್ಕದಲ್ಲಿ ರಸ್ತೆಯಲ್ಲಿ ಜಲ್ಲಿಕಲ್ಲು ಚೆಲ್ಲಿ ಆತಂಕ: ಟಿಪ್ಪರ್‌ಗಳ ಅಬ್ಬರಕ್ಕೆ ಸಾರ್ವಜನಿಕರ ಆಕ್ರೋಶ

ವಿಟ್ಲ: ಕಾನತ್ತಡ್ಕದಿಂದ ಕೇರಳ ಸಂಪರ್ಕಿಸುವ ರಸ್ತೆಯಲ್ಲಿ ಟಿಪ್ಪರ್‌ಗಳ ಸಂಚಾರದಿಂದ ಸಾರ್ವಜನಿಕರಿಗೆ ತೊಂದರೆ ಎದುರಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದೀಗ ಕಾಶಿಮಠ ಸಮೀಪ ಟಿಪ್ಪರ್‌ವೊಂದರಿಂದ ರಸ್ತೆಯುದ್ದಕ್ಕೂ ಜಲ್ಲಿ ಕಲ್ಲುಗಳು ಚೆಲ್ಲಲ್ಪಟ್ಟ ಪರಿಣಾಮ, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯಲ್ಲಿ ಚೆಲ್ಲಿದ್ದ ಜಲ್ಲಿ ಕಲ್ಲುಗಳಿಂದ ಸಂಚಾರಕ್ಕೆ ಅಡ್ಡಿಯಾಗಿರುವುದನ್ನು ಗಮನಿಸಿದ ಕಾನತ್ತಡ್ಕ ನಿವಾಸಿ ಹಾಗೂ ವಿಟ್ಲದ ದಿ ಹಿಟ್ GYMನ ಟ್ರೈನರ್ ಬಶೀರ್ RK ತಕ್ಷಣ ಸ್ಥಳಕ್ಕೆ ಸ್ಪಂದಿಸಿದ್ದಾರೆ. ಸ್ಥಳೀಯ ಶಾಲಾ ಮಕ್ಕಳ ಸಹಕಾರದೊಂದಿಗೆ ರಸ್ತೆಯಲ್ಲಿದ್ದ ಜಲ್ಲಿ…

ವಿಟ್ಲ: ಕಾನತ್ತಡ್ಕದಿಂದ ಕೇರಳ ಸಂಪರ್ಕಿಸುವ ರಸ್ತೆಯಲ್ಲಿ ಟಿಪ್ಪರ್‌ಗಳ ಸಂಚಾರದಿಂದ ಸಾರ್ವಜನಿಕರಿಗೆ ತೊಂದರೆ ಎದುರಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದೀಗ ಕಾಶಿಮಠ ಸಮೀಪ ಟಿಪ್ಪರ್‌ವೊಂದರಿಂದ ರಸ್ತೆಯುದ್ದಕ್ಕೂ ಜಲ್ಲಿ ಕಲ್ಲುಗಳು ಚೆಲ್ಲಲ್ಪಟ್ಟ ಪರಿಣಾಮ, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿತ್ತು.

ರಸ್ತೆಯಲ್ಲಿ ಚೆಲ್ಲಿದ್ದ ಜಲ್ಲಿ ಕಲ್ಲುಗಳಿಂದ ಸಂಚಾರಕ್ಕೆ ಅಡ್ಡಿಯಾಗಿರುವುದನ್ನು ಗಮನಿಸಿದ ಕಾನತ್ತಡ್ಕ ನಿವಾಸಿ ಹಾಗೂ ವಿಟ್ಲದ ದಿ ಹಿಟ್ GYMನ ಟ್ರೈನರ್ ಬಶೀರ್ RK ತಕ್ಷಣ ಸ್ಥಳಕ್ಕೆ ಸ್ಪಂದಿಸಿದ್ದಾರೆ. ಸ್ಥಳೀಯ ಶಾಲಾ ಮಕ್ಕಳ ಸಹಕಾರದೊಂದಿಗೆ ರಸ್ತೆಯಲ್ಲಿದ್ದ ಜಲ್ಲಿ ಕಲ್ಲುಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಇದೇ ವೇಳೆ, ವಿಟ್ಲ ಕಾನತ್ತಡ್ಕದಿಂದ ಪ್ರತಿದಿನ ಕೇರಳದತ್ತ ಸುಮಾರು 300ರಿಂದ 500 ಟಿಪ್ಪರ್‌ಗಳು ಸಂಚರಿಸುತ್ತವೆ ಎಂಬ ಸ್ಥಳೀಯರ ಆರೋಪವಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪರಿಣಾಮಕಾರಿ ಕ್ರಮವಾಗಿಲ್ಲ ಎನ್ನಲಾಗಿದೆ.

ಟಿಪ್ಪರ್‌ಗಳ ಸಂಚಾರಕ್ಕೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮಾತ್ರ ಅನುಮತಿ ಇದೆ ಎನ್ನಲಾಗುತ್ತಿದ್ದರೂ, ದಿನದ 24 ಗಂಟೆಯೂ ವಾಹನಗಳ ಓಡಾಟ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಅಲ್ಲದೆ, ವಾಹನಗಳ ತೂಕ ಪರಿಶೀಲನೆ ಇಲ್ಲದೆ ಸಂಚರಿಸುವುದು, ಸಮರ್ಪಕ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಹಾಗೂ ಒಂದು ಪರ್ಮಿಟ್‌ನಲ್ಲಿ 5–6 ಟ್ರಿಪ್‌ಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿಬರುತ್ತಿವೆ.

ಇಂತಹ ಪರಿಸ್ಥಿತಿಯಲ್ಲಿ ರಸ್ತೆಯಲ್ಲಿ ಜಲ್ಲಿ ಕಲ್ಲು ಚೆಲ್ಲುವುದು ಮತ್ತಷ್ಟು ಅಪಾಯಕ್ಕೆ ಕಾರಣವಾಗಿದ್ದು, ಯಾವುದೇ ಅಪಘಾತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

ಟಿಪ್ಪರ್‌ಗಳ ಸಂಚಾರಕ್ಕೆ ಸಂಬಂಧಿಸಿದ ನಿಯಮಗಳ ಪಾಲನೆ, ವಾಹನಗಳ ತೂಕ ಪರಿಶೀಲನೆ, ಸಮಯದ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಹಾಗೂ ಸುರಕ್ಷತಾ ಕ್ರಮಗಳ ಮೇಲ್ವಿಚಾರಣೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಆದ್ಯತೆ ನೀಡಬೇಕು. ದೂರುಗಳ ಬಳಿಕವೂ ಸಮಸ್ಯೆ ಮುಂದುವರಿದರೆ ಅಧಿಕಾರಿಗಳ ಜವಾಬ್ದಾರಿ ಏನು? ಎಂಬ ಪ್ರಶ್ನೆಯನ್ನೂ ಸ್ಥಳೀಯರು ಎತ್ತಿದ್ದಾರೆ.

ಈ ಸಂದರ್ಭದಲ್ಲಿ ಸಮಸ್ಯೆ ಕಂಡ ತಕ್ಷಣ ಸ್ಪಂದಿಸಿ, ಶಾಲಾ ಮಕ್ಕಳ ಸಹಕಾರದೊಂದಿಗೆ ರಸ್ತೆಯನ್ನು ತೆರವುಗೊಳಿಸಿದ ಬಶೀರ್ RK ಅವರ ಸಾಮಾಜಿಕ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

About The Author

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports