ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ನಾಲ್ವರು ಭಾರತೀಯರು ಮತ್ತು ಒಬ್ಬರು ಸೌದಿ ಪ್ರಜೆ. ಇಬ್ಬರು ಕೇರಳ ಮೂಲದ ನರ್ಸ್ಗಳು, ಇನ್ನಿಬ್ಬರು ತಮಿಳುನಾಡು ಮೂಲದವರು. ರಸ್ತೆ ಅಪಘಾತವು ತೈಫ್ ರಾನಿಯಾ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಕೊಟ್ಟಾಯಂನ ಆಯರ್ಕನ್ನಂ ಮೂಲದ ಜೇಸಿ ಮೋಲ್ ಮ್ಯಾಥ್ಯೂ (36); ಕೊಟ್ಟಾಯಂನ ಕುರುಮಲ್ಲೂರು ಮೂಲದ ಅನಚಕುನ್ನೇಲ್ ಜೋಬಿನಾ ಜಾನಿ (26); ತಮಿಳುನಾಡಿನ ಅನ್ನಾ ಸತ್ಯ ನಗರದ ನಿವಾಸಿ ವಿಜಯಲಕ್ಷ್ಮಿ ಜಗದೀಶ್ (37); ಮತ್ತು ತಂಜಾವೂರಿನ ಪಟ್ಟುಕೊಟ್ಟೈನ ಆಂಥೋನಿ ಸ್ಟ್ರೀಟ್ ನಿವಾಸಿ ಹೆಪ್ಸಿಬಾ ದೇವಮಣಿ (33) ಎಂದು ಗುರುತಿಸಲಾಗಿದೆ.















