,

ಕೋರ್ಟ್ ಆವರಣದಲ್ಲೇ ಸಿನಿಮಾ ಶೈಲಿಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ರೌಡಿ ಶೀಟರ್ !!

ನ್ಯಾಯಾಲಯದ ಕಲಾಪಕ್ಕೆಂದು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಗಿದ್ದ ಕುಖ್ಯಾತ ರೌಡಿಶೀಟರ್ ಅರಬಾಝ್ ದೊಡಮನಿ, ಭದ್ರತಾ ಸಿಬ್ಬಂದಿಯನ್ನೇ ಯಾಮಾರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ವಿಚಾರಣೆಯ ಹಿನ್ನೆಲೆಯಲ್ಲಿ ಈತನನ್ನು ಕೋರ್ಟ್‌ ಆವರಣಕ್ಕೆ ಕರೆತಂದ ಸಂದರ್ಭದಲ್ಲಿ ಈ ನಾಟಕೀಯ ಬೆಳವಣಿಗೆ ನಡೆದಿದೆ. ನ್ಯಾಯಾಲಯದ ಆವರಣ ತಲುಪುತ್ತಿದ್ದಂತೆ ತನಗೆ ಚಹಾ ಕುಡಿಯಬೇಕೆಂಬ ಆಸೆ ವ್ಯಕ್ತಪಡಿಸಿದ ಆರೋಪಿಯನ್ನು ಪೊಲೀಸರು ಸಮೀಪದ ಟೀ ಅಂಗಡಿಗೆ ಕರೆದೊಯ್ದಿದ್ದಾರೆ. ಅಲ್ಲಿ ಚಹಾ ಸೇವಿಸಲು ಕೈಕೋಳ ಅಡ್ಡಿಯಾಗುತ್ತಿದೆ ಎಂದು ನಂಬಿಸಿದ ಆತ,…

ನ್ಯಾಯಾಲಯದ ಕಲಾಪಕ್ಕೆಂದು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಗಿದ್ದ ಕುಖ್ಯಾತ ರೌಡಿಶೀಟರ್ ಅರಬಾಝ್ ದೊಡಮನಿ, ಭದ್ರತಾ ಸಿಬ್ಬಂದಿಯನ್ನೇ ಯಾಮಾರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ವಿಚಾರಣೆಯ ಹಿನ್ನೆಲೆಯಲ್ಲಿ ಈತನನ್ನು ಕೋರ್ಟ್‌ ಆವರಣಕ್ಕೆ ಕರೆತಂದ ಸಂದರ್ಭದಲ್ಲಿ ಈ ನಾಟಕೀಯ ಬೆಳವಣಿಗೆ ನಡೆದಿದೆ.

ನ್ಯಾಯಾಲಯದ ಆವರಣ ತಲುಪುತ್ತಿದ್ದಂತೆ ತನಗೆ ಚಹಾ ಕುಡಿಯಬೇಕೆಂಬ ಆಸೆ ವ್ಯಕ್ತಪಡಿಸಿದ ಆರೋಪಿಯನ್ನು ಪೊಲೀಸರು ಸಮೀಪದ ಟೀ ಅಂಗಡಿಗೆ ಕರೆದೊಯ್ದಿದ್ದಾರೆ. ಅಲ್ಲಿ ಚಹಾ ಸೇವಿಸಲು ಕೈಕೋಳ ಅಡ್ಡಿಯಾಗುತ್ತಿದೆ ಎಂದು ನಂಬಿಸಿದ ಆತ, ಪೊಲೀಸರಿಂದ ಬೇಡಿ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಕೈಗಳು ಮುಕ್ತವಾಗುತ್ತಿದ್ದಂತೆ, ಮೊದಲೇ ಸಂಚು ರೂಪಿಸಿ ಸಜ್ಜುಗೊಳಿಸಲಾಗಿದ್ದ ದ್ವಿಚಕ್ರ ವಾಹನವನ್ನು ಏರಿ ಸ್ಥಳದಿಂದ ಕ್ಷಣಮಾತ್ರದಲ್ಲಿ ಧೂಳೆಬ್ಬಿಸಿ ಪರಾರಿಯಾಗಿದ್ದಾನೆ.

ಆರೋಪಿಯ ಪತ್ತೆಗೆ ಪೊಲೀಸರ ಬಲೆ

ಹಲ್ಲೆ, ಗಲಾಟೆ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕಾರಣಕ್ಕಾಗಿ ಈತನನ್ನು ಪೊಲೀಸರು ಈ ಹಿಂದೆ ಬಂಧಿಸಿ ಜೈಲಿಗಟ್ಟಿದ್ದರು. ಇದೀಗ ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಥದ್ದೊಂದು ಭದ್ರತಾ ಲೋಪದ ಘಟನೆ ಸಂಭವಿಸಿದ್ದು, ಪರಾರಿಯಾಗಿರುವ ರೌಡಿಶೀಟರ್ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.

About The Author

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports