,

ರಸ್ತೆ ಸಮಸ್ಯೆಯ ವಿರುದ್ಧ ಮಂಗಳೂರಿನ ಕದ್ರಿ ಶಿವಭಾಗ್ ರಸ್ತೆಯಲ್ಲಿ ವ್ಯಂಗ್ಯಭರಿತ ಬ್ಯಾನರ್!

ಮಂಗಳೂರು ನಗರದ ಕದ್ರಿ ಶಿವಭಾಗ್‌ನ 5ನೇ ಅಡ್ಡ ರಸ್ತೆಯಲ್ಲಿ ಹಾಕಲಾಗಿರುವ ಒಂದು ಬ್ಯಾನರ್ ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ರಸ್ತೆ ಸಮಸ್ಯೆಯ ವಿರುದ್ಧ ನಾಗರಿಕರು ವಿನೂತನವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. “ನಿಧಾನವಾಗಿ, ಎಚ್ಚರಿಕೆಯಿಂದ ಸಾಗಿರಿ… ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ!” ಎಂಬ ವ್ಯಂಗ್ಯಭರಿತ ಸಂದೇಶದ ಮೂಲಕ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಹೊಂಡಗಳ ದುಸ್ಥಿತಿಯನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲು ನಾಗರಿಕರು ಮುಂದಾಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮತಯಾಚನೆಗಾಗಿ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು, ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಷ್ಟು…

ಮಂಗಳೂರು ನಗರದ ಕದ್ರಿ ಶಿವಭಾಗ್‌ನ 5ನೇ ಅಡ್ಡ ರಸ್ತೆಯಲ್ಲಿ ಹಾಕಲಾಗಿರುವ ಒಂದು ಬ್ಯಾನರ್ ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ರಸ್ತೆ ಸಮಸ್ಯೆಯ ವಿರುದ್ಧ ನಾಗರಿಕರು ವಿನೂತನವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

“ನಿಧಾನವಾಗಿ, ಎಚ್ಚರಿಕೆಯಿಂದ ಸಾಗಿರಿ… ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ!”

ಎಂಬ ವ್ಯಂಗ್ಯಭರಿತ ಸಂದೇಶದ ಮೂಲಕ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಹೊಂಡಗಳ ದುಸ್ಥಿತಿಯನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲು ನಾಗರಿಕರು ಮುಂದಾಗಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಮತಯಾಚನೆಗಾಗಿ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು, ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಷ್ಟು ಕಾಳಜಿ ವಹಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಈ ಬ್ಯಾನರ್ ಎತ್ತಿದೆ.

ರಸ್ತೆಯಲ್ಲಿರುವ ಹೊಂಡಗಳಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಘಾತದ ಭೀತಿಯೂ ಎದುರಾಗಿದೆ. ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸುಗಮ ರಸ್ತೆ ಒದಗಿಸುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಲ್ಲವೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.

ಸಾಮಾನ್ಯವಾಗಿ ರಸ್ತೆ ದುರಸ್ತಿಗಾಗಿ ಮನವಿ, ಪ್ರತಿಭಟನೆ ನಡೆಸುವ ನಾಗರಿಕರು, ಇಲ್ಲಿ ವ್ಯಂಗ್ಯದ ಮೂಲಕವೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಮತ ಕೇಳಲು ಬರುವವರಿಗೆ ಜನರ ನೆನಪಿದೆ, ಆದರೆ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸಮಯವಿಲ್ಲವೇ?

ಕದ್ರಿ ಶಿವಭಾಗ್‌ನ 5ನೇ ಅಡ್ಡ ರಸ್ತೆಯ ನಾಗರಿಕರ ಈ ಸಂದೇಶ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುತ್ತದೆಯೇ? ರಸ್ತೆ ಹೊಂಡಗಳಿಗೆ ಮುಕ್ತಿ ಸಿಗುತ್ತದೆಯೇ? ಎಂಬುದನ್ನು ಕಾದು ನೋಡಬೇಕಿದೆ.

About The Author

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports