,

ಮಂಗಳೂರು: ಕಾನೂನುಬದ್ಧ ಗೋ ಮಾಂಸ ಸಾಗಾಟಕ್ಕೆ ಅಡ್ಡಿಪಡಿಸಿದರೆ 10 ವರ್ಷ ಜೈಲು ಶಿಕ್ಷೆ: ಪೊಲೀಸ್ ಆಯುಕ್ತ ಸುಧೀ‌ರ್ ಕುಮಾರ್ ರೆಡ್ಡಿ

ಮಂಗಳೂರು: ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಕರಪತ್ರದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀ‌ರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಗೋಹತ್ಯೆ ನಿಷೇಧಿತವಾದರೂ ಕಾನೂನುಬದ್ಧ ಮಾಂಸ ಸಾಗಣೆ ಹಾಗೂ ಮಾರಾಟಕ್ಕೆ ಅವಕಾಶವಿದೆ ಎಂದು ತಿಳಿಸಿದ್ದಾರೆ. ಬಜರಂಗದಳ ಮಂಗಳೂರು ಮಹಾನಗರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕರಪತ್ರವೊಂದು ಹರಿದಾಡುತ್ತಿದ್ದು, “ತಲಪಾಡಿಯಿಂದ ಜೋಗಟ್ಟಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ರಮ ಗೋಸಾಗಾಟದ ವಾಹನದ ಮಾಹಿತಿಯನ್ನು ಕಂಕನಾಡಿ ಪೊಲೀಸ್ ಠಾಣೆಗೆ ನೀಡಿದರೂ ನಿರ್ಲಕ್ಷಿಸಲಾಯಿತು. ಯಾವುದೇ ಕೇಸು ದಾಖಲಿಸದೆ ಕಸಾಯಿಖಾನೆಗೆ ತಲುಪಲು ಬಿಡಲಾಗಿದೆ” ಎಂದು ಆರೋಪಿಸಲಾಗಿತ್ತು. ಈ…

ಮಂಗಳೂರು: ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಕರಪತ್ರದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀ‌ರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಗೋಹತ್ಯೆ ನಿಷೇಧಿತವಾದರೂ ಕಾನೂನುಬದ್ಧ ಮಾಂಸ ಸಾಗಣೆ ಹಾಗೂ ಮಾರಾಟಕ್ಕೆ ಅವಕಾಶವಿದೆ ಎಂದು ತಿಳಿಸಿದ್ದಾರೆ.

ಬಜರಂಗದಳ ಮಂಗಳೂರು ಮಹಾನಗರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕರಪತ್ರವೊಂದು ಹರಿದಾಡುತ್ತಿದ್ದು, “ತಲಪಾಡಿಯಿಂದ ಜೋಗಟ್ಟಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ರಮ ಗೋಸಾಗಾಟದ ವಾಹನದ ಮಾಹಿತಿಯನ್ನು ಕಂಕನಾಡಿ ಪೊಲೀಸ್ ಠಾಣೆಗೆ ನೀಡಿದರೂ ನಿರ್ಲಕ್ಷಿಸಲಾಯಿತು. ಯಾವುದೇ ಕೇಸು ದಾಖಲಿಸದೆ ಕಸಾಯಿಖಾನೆಗೆ ತಲುಪಲು ಬಿಡಲಾಗಿದೆ” ಎಂದು ಆರೋಪಿಸಲಾಗಿತ್ತು.

ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಪೊಲೀಸ್ ಕಮೀಷನರ್, ಗೋಹತ್ಯೆ ಅಥವಾ ಜಾನುವಾರುಗಳ ಅಕ್ರಮ ಸಾಗಣೆಯ ಪ್ರತಿಯೊಂದು ಪ್ರಕರಣವನ್ನೂ ಸಾರ್ವಜನಿಕರು ಮಾಹಿತಿ ನೀಡಿದರೆ ತನಿಖೆ ನಡೆಸಿ ಪತ್ತೆಹಚ್ಚಲಾಗುವುದು ಎಂದು ಹೇಳಿದ್ದಾರೆ.

ಈ ನಿರ್ದಿಷ್ಟ ಪ್ರಕರಣದಲ್ಲಿ ಕೇರಳದಿಂದ ಖರೀದಿಸಿದ ಮಾಂಸವನ್ನು ಇಲ್ಲಿನ ಪರವಾನಗಿ ಪಡೆದ ಅಂಗಡಿಗೆ ತರಲಾಗಿತ್ತು. ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ ಮತ್ತು ಅದು ಅಪರಾಧವಾಗಿದೆ. ಆದರೆ, ನಿಯಮಾನುಸಾರ ಮಾಂಸದ ಮಾರಾಟ ಮತ್ತು ಸಾಗಣೆಗೆ ಕಾನೂನಿನಲ್ಲಿ ಅವಕಾಶವಿದೆ ಎಂದು ಕಮೀಷನರ್ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಕಾನೂನುಬದ್ಧವಾಗಿ ಅನುಮತಿಸಲಾದ ಚಟುವಟಿಕೆಗಳನ್ನು ತಡೆಯಲು ಯತ್ನಿಸುವುದು, ವಾಹನಗಳನ್ನು ಅಡ್ಡಗಟ್ಟುವುದು, ಸಂಬಂಧಪಟ್ಟವರ ಮೇಲೆ ಹಲ್ಲೆ ನಡೆಸುವುದು ಅಥವಾ ಬೆದರಿಕೆ ಹಾಕುವುದು ಕೂಡ ಅಪರಾಧವಾಗಿದ್ದು, ಇದಕ್ಕೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.

ಬೆಳಿಗ್ಗೆ ವಾಹನವೊಂದನ್ನು ತಡೆಯಲು ಯತ್ನಿಸಲಾಗಿದೆ ಎಂಬ ದೂರು ಬಂದಿದ್ದು, ತನಿಖೆಯಲ್ಲಿ ಇದು ಸತ್ಯವೆಂದು ಕಂಡುಬಂದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಯಾರಾದರೂ ಮಾಂಸದ ಮಾರಾಟ ಅಥವಾ ಸಾಗಣೆಯನ್ನು ನಿಲ್ಲಿಸಲು ಬಯಸಿದರೆ, ಅವರು ಅದಕ್ಕಾಗಿ ಸೂಕ್ತ ಕಾನೂನು ರೂಪಿಸಿಕೊಳ್ಳಲಿ, ಆಗ ನಾವು ಅದನ್ನು ತಡೆಯುತ್ತೇವೆ ಎಂದು ಕಮಿಷನರ್ ಹೇಳಿದರು

About The Author

Leave a Reply

Your email address will not be published. Required fields are marked *

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports