Category: ಬ್ರೇಕಿಂಗ್ ನ್ಯೂಸ್
-

ಕೌಟುಂಬಿಕ ಆಸ್ತಿ ವಿವಾದ ಇತ್ಯರ್ಥಕ್ಕೆ ಕ್ರಿಮಿನಲ್ ಕಾನೂನು ಬಳಸುವಂತಿಲ್ಲ- ಹೈಕೋರ್ಟ್
ಕೌಟುಂಬಿಕ ಆಸ್ತಿ ವಿವಾದಗಳ ಇತ್ಯರ್ಥಕ್ಕಾಗಿ ಕ್ರಿಮಿನಲ್ ಕಾನೂನನ್ನು ಒತ್ತಡ ತಂತ್ರವಾಗಿ ಅಥವಾ ಚೌಕಾಸಿಯ ಅಸ್ತ್ರವಾಗಿ ಬಳಸಲು ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. 73 ವರ್ಷದ ವೃದ್ಧ ತಾಯಿ ಹಾಗೂ ಅವರ ಹಿರಿಯ ಮಗಳ ವಿರುದ್ಧ ಕಿರಿಯ ಮಗಳು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿರುವ ನ್ಯಾಯಪೀಠ, ಖಾಸಗಿ ಜಗಳಗಳಲ್ಲಿ ಅನುಕೂಲ ಪಡೆಯಲು ಕಾನೂನು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತೀವ್ರವಾಗಿ ತಖ್ಖೆ ಮಾಡಿದೆ. ಅರ್ಜಿದಾರರಾದ 73 ವರ್ಷದ ವೃದ್ಧೆ ಹಾಗೂ ಅವರ ಹಿರಿಯ ಮಗಳು ತಮ್ಮ…
-

ಮಂಗಳೂರು : ಫೇಸ್‌ಬುಕ್ ಜಾಹೀರಾತು ನಂಬಿ 16.2 ಲಕ್ಷ ಕಳೆದುಕೊಂಡ ಮಹಿಳೆ
ಮಂಗಳೂರು: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ಸೈಬರ್ ವಂಚನೆಗೆ ಮಂಗಳೂರಿನ 61 ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದು, ಬರೋಬ್ಬರಿ 16.2 ಲಕ್ಷ ರೂ ಹಣವನ್ನು ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನಂಬಿ ಹೂಡಿಕೆ ಮಾಡಿದ ಮಹಿಳೆ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಸೈಬರ್ ಆರ್ಥಿಕ ಮತ್ತು ನಾರ್ಕೋಟಿಕ್ಸ್ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಅನುಸಾರ, ಎಪ್ರಿಲ್‌ನಲ್ಲಿ ಮಹಿಳೆ ಫೇಸ್‌ಬುಕ್‌ನಲ್ಲಿ ಹೂಡಿಕೆಗೆ ಕುರಿತು ಬಂದ ಜಾಹೀರಾತು ಲಿಂಕನ್ನು ಕ್ಲಿಕ್ ಮಾಡಿ ಟೆಲಿಗ್ರಾಂ ಗ್ರೂಪ್‌ಗೆ ಸೇರಿದ್ದರು. ಯುಕೆ ದೇಶದ ಕೋಡ್…
-

ಮಣಿಪಾಲದ ಪಬ್ ಹಾಗೂ ಬಾರ್ ಗಳ ಮೇಲೆ ಮಧ್ಯರಾತ್ರಿ ಪೊಲೀಸರ ದಾಳಿ..!!
ಉಡುಪಿ : ಮಣಿಪಾಲದ ಪಬ್ ಹಾಗೂ ಬಾರ್ ಗಳ ಮೇಲೆ ಮಧ್ಯರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಮಣಿಪಾಲದ ಈಶ್ವರನಗರ, ಟೈಗರ್ ಸರ್ಕಲ್ ಸಮೀಪದ ಬಾರ್ ಗಳಿಗೆ ದಾಳಿ ನಡೆಸಿ, ನಿಯಮ ಉಲ್ಲಂಘನೆ ಮಾಡಿರುವ ಪಬ್ ಹಾಗೂ ಬಾರ್ ಮಾಲಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ವೇಳೆ ಪಬ್ ಹಾಗೂ ಬಾರ್ ಗಳಲ್ಲಿ ಅಪ್ರಾಪ್ತರಿಗೆ ಅನುಮತಿ ನೀಡಿರುವುದು ಕಂಡು ಬಂದಿದ್ದು, ಅಪ್ರಾಪ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಾರ್ ನಲ್ಲಿ ಇದ್ದರು.ಏಳೆಂಟು ಪಬ್, ಬಾರ್ ಗಳಿಗೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಉಡುಪಿ…
-

ಕೆಲಸ ಮುಗಿಸಿ ಮನೆಗೆ ಮರಳುವಾಗ ಕಾಡಾನೆ ದಾಳಿ; ವ್ಯಕ್ತಿಯ ದಾರುಣ ಅಂತ್ಯ
ಬೆಳ್ತಂಗಡಿ: ತಾಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಸಂಜೆ ನಡೆದಿದೆ. ಮೃತರನ್ನು ಇಡ್ಯಾಲು ನಿವಾಸಿ ಬಾಲಕೃಷ್ಣ ಗೌಡ (55) ಎಂದು ಗುರುತಿಸಲಾಗಿದೆ. ಬಾಲಕೃಷ್ಣ ಗೌಡ ಅವರು ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಹಿಂದಿರುಗುವ ವೇಳೆ ಕಾಡಾನೆ ದಾಳಿಗೆ ಒಳಗಾಗಿರಬಹುದು ಎಂದು ಶಂಕಿಸಲಾಗಿದೆ. ಸಂಜೆ ಕಳೆದರೂ ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ಆರಂಭಿಸಿದರು. ಹುಡುಕಾಟದ ವೇಳೆ ಅವರು ಧರಿಸಿದ್ದ…
-

ಪಡುಬಿದ್ರೆ : ಲಾರಿ ಮಾರಾಟದ ಹಣ ನೀಡದೆ ವಂಚನೆ- ಪ್ರಕರಣ ದಾಖಲು
ಪಡುಬಿದ್ರೆ : ಲಾರಿ ಖರೀದಿಸಿದ ಬಳಿಕ ಒಪ್ಪಂದದಂತೆ ಬಾಕಿ ಹಣ ಪಾವತಿಸದೆ ನಂಬಿಕೆದ್ರೋಹ ಎಸಗಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಲ್ಕಿ ನಿವಾಸಿ ಬಸವರಾಜ ಜಿ. ಹುನಕುಂಟಿ ಅವರು ತಮ್ಮ ಲಾರಿ ವಾಹನವನ್ನು ಶಾಮೀರ್ ಪಾಶ ಎಂಬವರಿಗೆ ಮಾರಾಟ ಮಾಡಿದ್ದರು. ವ್ಯವಹಾರದ ವೇಳೆ ಆರೋಪಿಯು 35,000 ರೂ. ಮೊತ್ತವನ್ನು ಚೆಕ್ ಮೂಲಕ ಹಾಗೂ 20,000 ರೂ. ನಗದು ರೂಪದಲ್ಲಿ ಪಾವತಿಸಿ, ಉಳಿದ 3.15 ಲಕ್ಷ ಹಣವನ್ನು ಬಳಿಕ ನೀಡುವುದಾಗಿ ಮೌಖಿಕ ಒಪ್ಪಂದ…
-

ಕುಂದಾಪುರ: ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಪ್ರಕರಣ- ಆರೋಪಿ ಡೆರಿಕ್ ಕ್ರಾಸ್ತಾ ಅರೆಸ್ಟ್
ಕುಂದಾಪುರ: ಇಲ್ಲಿನ ಚರ್ಚ್ ರಸ್ತೆಯಲ್ಲಿ ಜು.31 ಶುಕ್ರವಾರ ನಸುಕಿನ ವೇಳೆ ನಡೆದ ಶೂಟೌಟ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಡುಪಿ ಜಿಲ್ಲಾ ಎಸ್ಪಿ ನೇತೃತ್ವದಲ್ಲಿ ರಚಿಸಿದ ಪೊಲೀಸರ ವಿಶೇಷ ತಂಡ ಬಂಧಿಸಿದೆ. ಹೆಮ್ಮಾಡಿ ಸಮೀಪದ ಕನ್ನಡಕುದ್ರು ಮೂಲದ ಪ್ರಸ್ತುತ ಕುಂದಾಪುರದ ಫ್ಲ್ಯಾಟ್‌ವೊಂದರಲ್ಲಿ ವಾಸವಿರುವ ಡೆರಿಕ್ ಕ್ರಾಸ್ತಾ (55) ಬಂಧಿತ ಆರೋಪಿ. ಹೆಬ್ರಿ ಮೂಲದ ಪ್ರಸ್ತುತ ಬಾರ್ಕೂರು ಕಚ್ಚೂರು ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾ (45) ಎನ್ನುವರನ್ನು ಗುಂಡಿಕ್ಕಿ ಹತ್ಯೆ ನಡೆಸಿದ ಆರೋಪಿ…
-

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣ- ಆರೋಪಿ ಚೇತನ್‌ಗೆ ನ್ಯಾಯಾಂಗ ಬಂಧನ
ಬಂಟ್ವಾಳ: ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಚೇತನ್‌ನನ್ನು ತನಿಖೆಯ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣ ನಡೆದ ಬಳಿಕ ಪರಾರಿಯಾಗಿದ್ದ ಚೇತನ್ ವಿಷಕಾರಿ ಪದಾರ್ಥ (ಇಲಿಪಾಷಾಣ) ಸೇವಿಸಿದ್ದ ಹಿನ್ನೆಲೆಯಲ್ಲಿ ಅಸ್ವಸ್ಥನಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ವೈದ್ಯರ ಅನುಮತಿ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.…
-

ಶಾಲಾ-ಕಾಲೇಜುಗಳ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್‌ಫುಡ್ ನಿಷೇಧ: ಯು.ಟಿ. ಖಾದರ್ ಆದೇಶ
ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ಸುತ್ತಮುತ್ತ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್‌ಫುಡ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆರೋಗ್ಯ ಸಚಿವ ಯು.ಟಿ. ಖಾದರ್ ಆದೇಶ ಹೊರಡಿಸಿದ್ದಾರೆ. ಹೆಚ್ಚು ಕೊಬ್ಬಿನಂಶ ಇರುವ ಆಹಾರಗಳ ಕುರಿತು ಆರೋಗ್ಯ ಇಲಾಖೆ ಸಮೀಕ್ಷೆ ನಡೆಸಿದಾಗ ರಾಜ್ಯದ 134 ಶಾಲಾ-ಕಾಲೇಜುಗಳು ತಮ್ಮದೇ ಸ್ವಂತ ಕ್ಯಾಂಟಿನ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಅನಾರೋಗ್ಯಕರ ಜಂಕ್‌ಫುಡ್‌ಗಳನ್ನು ಮಾರಾಟ ಮಾಡುತ್ತಿರುವುದು ತಿಳಿದುಬಂದಿತ್ತು. ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ…
-

ಮೂಡುಬಿದಿರೆ: ಯುವಕನೊಬ್ಬ ಅಕ್ಕನಿಗೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಲೇ ಆತ್ಮಹತ್ಯೆಗೆ ಶರಣು!!
ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದ ನಾಣಿಲ್ ಎಂಬಲ್ಲಿ ಯುವಕನೊಬ್ಬ ತನ್ನ ಅಕ್ಕನಿಗೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಲೇ ಆತ್ಮಹತ್ಯೆಗೆ ಶರಣಾದ ಘಟನೆ ಮುಂಜಾನೆ ಸಂಭವಿಸಿದೆ. ಬೆಳ್ತಂಗಡಿ ತಾಲೂಕಿನ ಕಾಜೂರು ಮೂಲದ ಸಯ್ಯದ್ ಅನ್ವರ್ (25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ಅನ್ವರ್ ಕಳೆದ ಕೆಲವು ಸಮಯದಿಂದ ಇಸ್ಮಾಯಿಲ್ ಅವರ ಬಾಡಿಗೆ ಮನೆಯಲ್ಲಿ ಪತ್ನಿ ಮಗುವಿನೊಂದಿಗೆ ವಾಸವಾಗಿದ್ದು ಪತಿ,ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತೆನ್ನಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೀನಿನ ಟೆಂಪೊದಲ್ಲಿ…
-

ಖಾಸಗಿ ಬ್ರೋಕರ್ ರೊಬ್ಬರ ನಿಯಂತ್ರಣದಲ್ಲಿ “ರಾಜ್ಯ ವೈದ್ಯಕೀಯ ಸರಬರಾಜು ನಿಗಮ”??
ಸಾಲು ಸಾಲು ವಿವಾದ ಮತ್ತು ಎಡವಟ್ಟುಗಳ ಮೂಲಕ ಅಪಖ್ಯಾತಿಗೀಡಾಗಿರುವ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವನ್ನೇ (ಕೆಎಸ್‌ಎಂಎಸ್‌ಸಿಎಲ್) ಮಧ್ಯವರ್ತಿಯೊಬ್ಬ ( ಬ್ರೋಕರ್) ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಬಗ್ಗೆ ಗುರುತರ ಆರೋಪಗಳು ಕೇಳಿಬಂದಿದೆ. ಪ್ರತಿ ವರ್ಷ ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಗ್ಲೂಕೋಸ್ ಬಾಟಲ್, ಆ್ಯಂಟಿಬಯಾಟಿಕ್ ಮಾತ್ರೆ ಮತ್ತು ವೈದ್ಯಕೀಯ ಸಲಕರಣೆಗಳ ಖರೀದಿಗಾಗಿ ಆರೋಗ್ಯ ಇಲಾಖೆ ಅಧೀನದ ಕೆಎಸ್‌ಎಂಎಸ್‌ಸಿಎಲ್‌ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಾವಿರಾರು ಕೋಟಿ ರೂ. ಅನುದಾನ ಕೊಡುತ್ತಿದೆ. ಈ ಅನುದಾನ ಬಳಸಿಕೊಂಡು ನಿಗಮವು…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











